ಕೈರಂಗಳದ ಅಮೃತಧಾರಾ ಗೋಶಾಲೆಗೆ ಮಾತೃತ್ವಮ್ ವತಿಯಿಂದ ಮೇವು

ದಿ. 29/11/2019 ರಂದು ಮಂಗಳೂರು ಹವ್ಯಕ ಮಂಡಲದˌ ಮುಡಿಪು ವಲಯ ವ್ಯಾಪ್ತಿಯಲ್ಲಿರುವ ಪುಣ್ಯಕೋಟಿ ನಗರ, ಕೈರಂಗಳದ ಅಮೃತಧಾರಾ ಗೋಶಾಲೆಗೆ #ಮಾತೃತ್ವಮ್ ವತಿಯಿಂದ ೧ ಲೋಡ್ ಮೇವು ಪೂರೈಸಲಾಯಿತು.

ಗೋಶಾಲೆಯ ಸಮಿತಿಯ ಅಧ್ಯಕ್ಷರಾದ ಶ್ರೀರಾಜಾರಾಮ್ ಭಟ್ ಟಿ.ಜಿ ಹಾಗೂ ಗೋಶಾಲಾ ಸಮಿತಿಯ ಪದಾಧಿಕಾರಿಗಳು, ಮಾತೃತ್ವಮ್ ಕೇಂದ್ರ ಸಮಿತಿಯ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು, ಮಂಗಳೂರು ಮಂಡಲದ ಮಾತೃ ಪ್ರಧಾನೆ ಶ್ರೀಮತಿ ಜ್ಯೋತಿಲಕ್ಷ್ಮಿ ಅಮೈ ಹಾಗೂ ಮಾತೃತ್ವಮ್ ನ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.