ಗೋಮಹತಿ ಕಾರ್ಯಾಗಾರ

Loading Map....

Date/Time
Date(s) - 02/12/2018
8:00 AM - 5:00 PM

Location
Sri Raghavendra Gou Ashrama

Categories


ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ‌ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರವು ಗೋಮಹತಿ ವಿಭಾಗದ ರಾಜ್ಯಾಧ್ಯಕ್ಷ ಶ್ರೀ ನಿತ್ಯಾನಂದ ವಿವೇಕಾವಂಶಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ಜೊತೆಗೆ ಇನ್ನೂ ಅನೇಕ ಯುವ ವಾಗ್ಮಿಗಳು, ಗೋ-ವಿಚಾರ ತಜ್ಞರು ಭಾಗವಹಿಸಲಿದ್ದಾರೆ.

▪ ಗೋವಿಚಾರ ಜಾಗೃತಿ, ಭಾಷಣ ಕಲೆಗಳ ತರಬೇತಿ
▪ ವಿಶಾಲವಾದ ಗೋಶಾಲೆಯಲ್ಲಿ ವಿಹಾರ-ವಿಚಾರ
▪ ಗೋವುಗಳೊಡನೆ ಒಡನಾಟ
▪ ಗವ್ಯೋತ್ಪನ್ನ ತಯಾರಿ ಘಟಕಕ್ಕೆ ಭೇಟಿ ಹಾಗೂ ಮಾಹಿತಿ
▪ ಸುಗ್ರಾಸ ಭೋಜನ

ಇವೇ ಮೊದಲಾದ ವಿಶೇಷತೆಗಳನ್ನು ಈ ಕಾರ್ಯಾಗಾರ ಒಳಗೊಂಡಿದೆ. ಶಿಬಿರಾರ್ಥಿಗಳೊಡನೆ ಮುಕ್ತ ಸಂವಾದವೂ ಇರಲಿದೆ.
ಒಟ್ಟಿನಲ್ಲಿ ಗೋವುಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಬೇಕಾಗುವ ಎಲ್ಲ ಅಂಶಗಳನ್ನೊಳಗೊಂಡ ಈ ಕಾರ್ಯಾಗಾರದ ಮೂಲಕ ಒಬ್ಬ ವೃತ್ತಿಪರ ವಾಗ್ಮಿಯಾಗಿ ತಯಾರಾಗುವ ಸದವಕಾಶ ಇದಾಗಿದೆ. ಆಸಕ್ತರು ಈ ಕೂಡಲೇ ನೊಂದಾಯಿಸಿಕೊಳ್ಳಲು ಕೋರಿದೆ.

ದೇಶ: ಶ್ರೀರಾಘವೇಂದ್ರ ಗೋಆಶ್ರಮ,‌ ಮಾಲೂರು, ಕೋಲಾರ
ಕಾಲ: ಡಿಸೆಂಬರ್ 2, ಭಾನುವಾರ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 5:00 ಗಂಟೆ

ವಿ.ಸೂ.: ಮೊದಲು ಹೆಸರು ನೊಂದಾಯಿಸಿದ 30 ಜನಕ್ಕೆ ಆದ್ಯತೆ

ನೊಂದಣಿಗಾಗಿ ಸಂಪರ್ಕಿಸಿ: 07892976086