ದಿನಾಂಕ ೧೨/೮/೨೦೧೯ ರಂದು ಭಾರತೀಯ ಗೋಪರಿವಾರ ಶ್ರೀ ರಾಮಚಂದ್ರಾಪುರ ಮಠ ನೇತ್ರತ್ವದಲ್ಲಿ ದಾವಣಗೆರೆ ಜಿಲ್ಲೆಯ ಭಾರತೀಯ ಗೋಪರಿವಾರದ ಸಂಘಟಕರಾದ ಶ್ರೀಕಾಂತ್ ಹಾಗೂ ತಂಡದವರಿಂದ ಮತ್ತು ಸುವರ್ಣ ಟಿವಿ ರಾಜ್ ಅವರ ಸಹಕಾರದಿಂದ ಆರ್ ಕೆ ಭಟ್ ಬೆಳ್ಳಾರೆ ಶ್ರೀ ಸಂಯೋಜಕ, ಭಾರತೀಯ ಗೋಪರಿವಾರ ಶ್ರೀ ರಾಮಚಂದ್ರಾಪುರ ಮಠ ಇವರ ಸಂಯೋಜನೆಯಲ್ಲಿ ೧ ದೊಡ್ಡ ಲಾರಿ ಲೋಡ್ ಒಣ ಮೇವು ಹಾಗೂ ಅರ್ಧ ಟನ್ ಹಿಂಡಿಯನ್ನು ಹಾನಗಲ್ ನಲ್ಲಿ ಪರಶುರಾಮ್ ಜಾದವ್ ಅವರು ಮುನ್ನಡೆಸುವ ಗೋಶಾಲೆಗೆ ಕಳುಹಿಸಿ ಕೊಡಲಾಯಿತು. ಈ ಗೋ ಶಾಲೆಗೆ ನೆರೆಪೀಡಿತ ಸುತ್ತ ಮುತ್ತಲಿನ ಗ್ರಾಮಗಳಿಂದ ರೈತರು ಒಂದಷ್ಟು ಗೋವುಗಳನ್ನ ತಂದು ಬಿಟ್ಟಿರುತ್ತಾರೆ ಎಂದು ನಮ್ಮ ಸ್ಥಳೀಯ ಭಾರತೀಯ ಗೋಪರಿವಾರದವರು ತಿಳಿಸಿರುತ್ತಾರೆ . ಮುಂದಿನ ದಿನಗಳಲ್ಲಿ ಇನ್ನಷ್ಟು ಮೇವು ಬೇಕೆಂದು ಕೂಡ ಸ್ಥಳೀಯ ಸಂಘಟಕರು ತಿಳಿಸಿರುವ ಕಾರಣ ಆದ್ಯತೆಯ ಮೇರೆಗೆ ಮುಂದೆ ಮೇವು ಕಳುಹಿಸುವಲ್ಲಿ ಭಾರತೀಯ ಗೋಪರಿವಾರ ಶ್ರೀ ರಾಮಚಂದ್ರಾಪುರ ಮಠ ನೇತ್ರತ್ವದಲ್ಲಿ ಪ್ರಯತ್ನಿಸಲಾಗುವುದು.