ಗೋಪುಷ್ಟಿ ಅಭಿಯಾನ ತುಮಕೂರು

ದಿನಾಂಕ: 25,26-01-2014ರಂದು ತುಮಕೂರು ಜಿಲ್ಲಾ ಗೋಪುಷ್ಟಿ ಅಭಿಯಾನದ ಪ್ರಯುಕ್ತ ತುಮಕೂರು ನಗರದಲ್ಲಿ ಅಭಿಯಾನ ನಡ್ಯಿತು. ತುಮಕೂರಿನಲ್ಲಿ ನಡೆದ ಅಭಿಯಾನಕ್ಕೆ ಪರಮಪೂಜ್ಯ ಶ್ರೀ ಶ್ರೀ ಡಾ| ಶಿವಕುಮಾರ ಸ್ವಾಮಿಜಿಗಳು ಆಶೀರ್ವದಿಸಿ ಚಾಲನೆ ನೀಡಿದರು.

1

ಕಾರ್ಯಕರ್ತರನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ತುಮಕೂರು ನಗರದ ವಿವಿದೆಡೆ ಮನೆ ಮನೆ ಸಂಪರ್ಕ ಆರಂಭಿಸಲಾಯಿತು. ಎರಡು ದಿನಗಳಲ್ಲಿ ಮನೆಗಳಿಗೆ ಬೇಟಿ ನೀಡಿ ಭಾರತೀಯ ಗೋವಂಶ, ಮಹಾನಂದಿ ಗೋಲೋಕದ ಬಗ್ಗೆ ಮಾಹಿತಿ ನೀಡಲಾಯಿತು. ಬೇಟಿ ನೀಡಿದ ಮನೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.

2

ತುಮಕೂರಿನ ಜಿ ಕೆ ಶ್ರೀನಿವಾಸ, ಮಧುಕರ್ ಹೆಗ್ಡೆ ಹಾಗೂ ಮುಕ್ತಾ ಶ್ರೀಪಾದ ಹೆಗ್ಡೆ ಹಾಗೂ ಬೆಂಗಳೂರು, ಹೊಸನಗರ, ಉಪ್ಪಿನಂಗಡಿ ಮಂಡಲದ ಕಾರ್ಯಕರ್ತರು ಭಾಗವಹಿಸಿದರು.