ಮಾತೃತ್ವಮ್ – ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು | Maatrutvam

ಜಗದ್ಗುರು ಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನ ಗೋಕರ್ಣ
ಶ್ರೀರಾಮಚಂದ್ರಾಪುರಮಠ

ಗೋಸೇವೆಯೆಂಬ ಪುಣ್ಯ ಕಾರ್ಯ

ಗೋವು ನಮ್ಮೆಲ್ಲರ ತಾಯಿ. ಹೆತ್ತ ತಾಯಿಗೂ ಹೊತ್ತ ಭೂಮಿಗೂ ಆಹಾರವಿತ್ತು ಸಲಹುತ್ತಿರುವ ಮಾತೆ ಗೋವು. ಗೋವಿದ್ದರೆ ನಾವು. ಲೋಕದ ಎಲ್ಲ ಜೀವಿಗಳಿಗೂ ಆಧಾರ ಗೋವು. ಅವಳಿಲ್ಲದೆ ಮನುಕುಲವೂ ಇಲ್ಲ, ಜೀವ ಸಂಕುಲವೂ ಇಲ್ಲ. ಆದ್ದರಿಂದಲೇ ನಮ್ಮ ಹಿರಿಯರು ಹೇಳಿದ್ದು – ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್

ಬದುಕಬಹುದು ನಾನು, ಬದುಕಬಹುದು ನೀನು, ಬದುಕಬಾರದೇನು? ಧೇನು

ಇಡೀ ದೇಶದ ಜನಜೀವನದ ಜೀವನಾಡಿಯಾಗಿರುವ ಗೋಸಂಪತ್ತು ಇಂದು ಕ್ಷೀಣಿಸುತ್ತಿದೆ. ದೇಶೀ ಗೋಸಂತತಿ ವಿನಾಶದತ್ತ ಸಾಗುತ್ತಿದೆ. ನಮ್ಮೆಲ್ಲರ ಗೋಮಾತೆ ಕಟುಕರ ಕೈಸೆರೆಯಾಗುತ್ತಿದ್ದಾಳೆ. ಆಕೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಮನೆಮನೆಗಳಲ್ಲಿ ಗೋವನ್ನು ಸಾಕುವುದು ಸುಲಭಸಾಧ್ಯವಲ್ಲ. ಆದರೆ ಗೋವನ್ನು ಪಾಲಿಸುವವರಿಗೆ ಕೈಲಾದಷ್ಟು ಸಹಾಯ ಮಾಡಿ, ಮನಮನಗಳಲ್ಲಿ ಅವಳಿಗೊಂದು ಸ್ಥಾನ ಖಂಡಿತಾ ಕೊಡಬಲ್ಲೆವು.

ಆದರೆ ಹೇಗೆ?
ಅದಕ್ಕೊಂದು ಮಾರ್ಗ ಮಾತೃತ್ವಮ್ ಮೂಲಕವಾಗಿ ನಮ್ಮೆದುರು ತೆರೆದಿದೆ.

ಬನ್ನಿ, ಮಾತೃತ್ವಮ್ ಸಂಘಟನೆಯ ಮೂಲಕ ಗೋಮಾತೆಯನ್ನು ಸಂರಕ್ಷಿಸೋಣ.

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆ – ಮಾತೃತ್ವಮ್

ಸೃಷ್ಟಿ ಸಂರಕ್ಷಣೆಯ ವಾತ್ಸಲ್ಯಧಾರೆ – ಮಾತೃತ್ವಮ್. ಭಗವಂತನ ಪ್ರಕಟರೂಪವಾದ ಎಲ್ಲಾ ಮಾತೆಯರನ್ನು ಒಂದೆಡೆ ಸಂಯೋಜಿಸಿ, ಸಂಘಟಿಸಿ, ಸತ್ಕಾರ್ಯಕ್ಕೆ ತೊಡಗಿಸುವ ಉದ್ದೇಶಕ್ಕಾಗಿ, ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು
ಸಂಸ್ಥಾಪಿಸಿ, ಅನುಗ್ರಹಿಸಿದ ಸಂಸ್ಥೆಯೇ “ಮಾತೃತ್ವಮ್”

ಶ್ರೀಮಾತೆಗೊಂದು ಗೋಮಾತೆ

ಕೋಟಿ ದೇವರಿಗೆ ಸಮನಾದ ಭಾರತೀಯ ಗೋಸಂಕುಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾತೃತ್ವಮ್ ಕರ್ತವ್ಯ ನಿರ್ವಹಿಸುತ್ತಿದೆ.

ಒಂದು ಗೋವು; ಒಂದು ಮಾತೆ ಎಂಬ ಗುರಿಯೊಂದಿಗೆ ಮಾತೃತ್ವಮ್ ನಿಮ್ಮ ಬಳಿ ಬಂದಿದೆ.

ಸ್ವತಃ ಒಂದು ಗೋವನ್ನು ಸಂರಕ್ಷಿಸುವ ಹೊಣೆ ಹೊತ್ತುಕೊಳ್ಳುವ ಒಬ್ಬ ತಾಯಿಯನ್ನು ಮಾಸದ ಮಾತೆ ಎಂದು ಮಾತೃತ್ವಮ್ ಗೌರವಿಸಿದೆ. ಈ ಮಾಸದಮಾತೆಯರೇ
ಗೋಸೇವೆಗೆ ನಿಮ್ಮನ್ನು ತೊಡಗಿಸುವ ಕಾರ್ಯಕರ್ತೆಯರು. ಇಂತಹ ಮಾಸದಮಾತೆಯರ ಗೋಸೇವೆಗೆ ಕೈಜೋಡಿಸುವುದರ ಮೂಲಕ ನೀವೂ ಗೋಮಾತೆಯ ಸೇವೆಯಲ್ಲಿ ಭಾಗಿಗಳಾಗಿ ಕೃತಾರ್ಥರಾಗ ಬನ್ನಿ.

ಒಂದು ಗೋವಿಗೆ ಒಂದು ವರ್ಷದ ಪೋಷಣೆಗೆ ತಗಲುವ ವೆಚ್ಚ -60,000ರೂಪಾಯಿಗಳು.

ಇಂತಹ ಸಾವಿರಾರು ದೇಶೀ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯ ಶ್ರೀ ರಾಮಚಂದ್ರಾಪುರ ಮಠದಿಂದ ನಡೆಯುತ್ತಿದೆ.

ಶ್ರೀರಾಮಚಂದ್ರಾಪುರಮಠ ನಡೆಸುವ ಗೋಶಾಲೆಗಳು

1. ಮಹಾನಂದಿ ಗೋಲೋಕ – ಹೊಸನಗರ.

2. ಅಮೃತಧಾರಾ ಗೋಶಾಲೆ – ಮಾಲೂರು

3. ಅಮೃತಧಾರಾ ಗೋಶಾಲೆ – ಮಹಾರಾಷ್ಟ್ರ

4. ಅಮೃತಧಾರಾ ಗೋಶಾಲೆ – ಮುಳಿಯ, ದ.ಕ.

5. ಕಾವೇರಮ್ಮ ಅಮೃತಧಾರಾ ಗೋಶಾಲೆ- ವೇಣೂರು, ದ.ಕ.

6. ಅಮೃತಧಾರಾ ಗೋಶಾಲೆ – ಪೆರಾಜೆ, ಮಾಣಿಮಠ

7. ಅಮೃತಧಾರಾ ಗೋಶಾಲೆ – ಹೊಸಾಡ, ಉ.ಕ.

8. ಅಮೃತಧಾರಾ ಗೋಶಾಲೆ – ಕೈರಂಗಳ,ದ.ಕ

9. ಗೋಸ್ವರ್ಗ – ಸಿದ್ದಾಪುರ

10. ಅಮೃತಧಾರಾ ಗೋಶಾಲೆ – ಬಜಕ್ಕೂಡ್ಲು, ಕೇರಳ

11. ನಂದಿನಿ ಗೋಶಾಲೆ – ಗಿರಿನಗರ, ಬೆಂಗಳೂರು.

12. ಅಮೃತಧಾರಾ ಗೋಶಾಲೆ – ಕಗ್ಗಲಿಪುರ, ಬೆಂಗಳೂರು

13. ಅಮೃತಧಾರಾ ಗೋಶಾಲೆ – ರಾಣಿಬೆನ್ನೂರು.

14. ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರ, ಜೇಡ್ಲ, ಸಂಪಾಜೆ, ದ.ಕ.

ಬನ್ನಿ, ಸಹಕರಿಸಿ,
ಗೋಕುಲದ ಉಳಿವೇ ಮನುಕುಲದ ಉಳಿವು;
ಗೋಕುಲದ ಅಳಿವೇ ಮನುಕುಲದ ಅಳಿವು

ಮಾತೃತ್ವಮ್ ಜೊತೆ ಕೈಜೋಡಿಸಿ.
ಗೋಸೇವೆಯ ಸಾರ್ಥಕತೆ ಪಡೆಯಿರಿ.
ಗೋವೂ ಉಳಿಯಲಿ; ನಾವೂ ಉಳಿಯೋಣ.

ಖಾತೆ ವಿವರ
A/C NAME : SAVIRADA SURABHI (A Unit of Kamadugha Trust R.)
A/C NO : 099 2500 103 7599 01
BANK : KARNATAKA BANK LTD

80G ಸೌಲಭ್ಯವಿದೆ

ಸಂಪರ್ಕ ಸಂಖ್ಯೆಗಳು: 9449595266, 8217617925, 9449595274, 9449610818, 6360308009.

Download PDF