ಮಾರ್ಚ್ ೩೦ ಮತ್ತು ೩೧ರಂದು ಪೆರ್ಲದ ಶ್ರೀಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ‘ಜನಜನನಿ’ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಬಜಕೂಡ್ಲಿನಲ್ಲಿರುವ ‘ಅಮೃತಧಾರಾ’ ಗೋಶಾಲೆಯಲ್ಲಿರುವ ಕಾಸರಗೋಡು ತಳಿ ಹಸುಗಳಿಗಾಗಿ ಮುಳಿಹುಲ್ಲಿನ ಸಂಗ್ರಹ ಕಾರ್ಯವು ಶ್ರಮದಾನದ ಮೂಲಕ ನಡೆಯಿತು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಫೆಬ್ರವರಿ ೧೨ ರಂದು ನೀರ್ಚಾಲು ಸನಿಹದ ಕುಮಾರಮಂಗಲ ಪರಿಸರದಲ್ಲಿ ಮತ್ತು ರಾಷ್ಟ್ರೀಯ ಮುಷ್ಕರದ ದಿನಗಳಾದ ಫೆಬ್ರವರಿ ೨೦, ೨೧ ರಂದು ಬದಿಯಡ್ಕದ ಪೆರ್ಮುಖ ಈಶ್ವರ ಭಟ್ಟರ ಹಿತ್ತಿಲಿನಿಂದ ಮುಳಿಹುಲ್ಲು ಸಂಗ್ರಹಿಸಿ ಕಾಸರಗೋಡು ತಳಿ ಗೋವುಗಳಿಗೆ ಆಸರೆಯಾದರು.